ಹಣಕಾಸಿನ ವ್ಯಾಪರದಲ್ಲಿ ನಷ್ಟವಿದೆಯಾ ? ಅದನ್ನು ಹೇಗೆ ನಿಭಾಯಿಸುವುದು - Trade Achievers

ಹಣಕಾಸಿನ ವ್ಯಾಪರದಲ್ಲಿ ನಷ್ಟವಿದೆಯಾ ? ಅದನ್ನು ಹೇಗೆ ನಿಭಾಯಿಸುವುದು

 In Blog, Charts, GOLD, NSE, Trading, US OIL

“ವೃತ್ತಿನಿರತ” ವಲ್ಲದಂತಹ ವ್ಯಾಪಾರ ನಡೆಸಬಹುದು. ಹಣಕಾಸಿನ ವ್ಯಾಪಾರದಲ್ಲಿ ವಹಿವಾಟು ನಡೆಸುವವರು ನಷ್ಟಕ್ಕೆ ಒಳಗಾಗುತ್ತಾರೆ. ನಾನಾರೀತಿಯ ಕಾರಣಗಳಿಂದ ವ್ಯಾಪಾರದಲ್ಲಿ ಕೆಲವೊಮ್ಮೆ ಬಹಳ ನಷ್ಟವನ್ನು ಅನುಭವಿಸಬೇಕಾಗುತ್ತದೆ, ಆದರೆ ಹಣಕಾಸಿನ ವ್ಯಾಪಾರದಲ್ಲಿ ಆಂತರಿಕ ಕಾರಣಗಳಿಂದಾಗಿ ಬಹು ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಆ ಕಾರಣವು ಒಬ್ಬ ಮನುಷ್ಯನ ವ್ಯಯುಕ್ತಿಕ  ಆಲೋಚನೆಯೇ ಕಾರಣವಾಗಿರುತ್ತದೆ.ಹಣಕಾಸಿನ ವ್ಯಾಪಾರದಲ್ಲಿ ನಿರಂತರವಾಗಿ ಯಶಸ್ಸು ಕಾಣಲು ಅಸಾಧ್ಯವಾಗಿದೆ.

ಮೇಲ್ಕಂಡ ವಿಷಯಕ್ಕೆ ಸಂಭಂದಪಟ್ಟಂತೆ,  ಹಣಕಾಸಿನ ವ್ಯಾಪಾರದಲ್ಲಿ ನಷ್ಟ ಎನ್ನುವುದು ಅನಿವಾರ್ಯ.  ಆದರೆ ಅದನ್ನು ಚಾಣುಕ್ಯತನದಿಂದ ನಿಭಾಯಿಸಲು ದಾರಿ ಇದೆ. ಇನ್ನು ಸ್ವಲ್ಪ ಹೆಚ್ಚಾಗಿ ಹೇಳಬೇಕೆಂದರೆ, ನಷ್ಟವು  ಹೇಗೆ ಉಂಟಾಗುವುದೆಂದರೆ ಸರಿಯಾದ ಸ್ಟಾಕ್ ಆಯ್ಕೆ ಆಸೆ ಮತ್ತು ಭಯ ಇವೆರಡು ಸ್ಥಿರವಾಗಿರುವುದಿಲ್ಲ. ಈಗ ಇದನ್ನು  ಸರಿದುಗಿಸುವುದು ಹೇಗೆಂದು ನೋಡೋಣ.

ಒಂದು ವಿಷಯವನ್ನು ಪ್ರತ್ಯೇಕಿಸುವುದು:-

 

ಬಹಳ ಜನರು ಹಣಕಾಸಿನ ವ್ಯಾಪಾರವನ್ನು ತಪ್ಪಾಗಿಯೇ ಆಯ್ಕೆ ಮಾಡುತ್ತಾರೆ, ಏಕೆಂದರೆ ಇದು ಬಹು ಜನರ ನಿರ್ಧಾರ. ಹಣಕಾಸಿನ ವ್ಯಾಪಾರ ಎನ್ನುವುದು ಒಬ್ಬ ವ್ಯಕ್ತಿಯ ವ್ಯಯಕ್ತಿಕ ನಿರ್ಧಾರವೇ ಹೊರತು ಸಾಮೂಹಿಕ ನಿರ್ಧಾರವಲ್ಲ.  ಒಂದು ವೇಳೆ ತಪ್ಪಾದಲ್ಲಿ, ಆದ ತಪ್ಪನ್ನು ಸರಿಪಡಿಸಿ ಮುನ್ನುಗ್ಗಬೇಕೆ ಹೊರೆತು, ಅತಿ ಹೆಚ್ಚು ಆಶಯ ಇರಬಾರದು.

 

 

ಕೆಲ ಸಂದರ್ಭದಲ್ಲಿ ಮಾತ್ರ ಅಂದುಕೊಂಡಂತಹ ಆದಾಯ ಬೇಗನೆ ಸಿಗುತ್ತದೆ. ಆದರೆ ಒಂದು ವಿಚಾರ, ನೀವು ಕೆಲವೊಮ್ಮೆ ನಷ್ಟವು ಅದೇ ವೇಗದಲ್ಲಿರುತ್ತದೆ ಎಂದು ತಿಳಿಯಬೇಕು. ನಾನು ಬಹಳ ಜನರನ್ನು ನೋಡಿದ್ದೇನೆ ಅವಶ್ಯಕತೆಇಲ್ಲದಂತಹ ನಷ್ಟವನ್ನು ಅನುಭವಿಸುರುತ್ತಾರೆ.

 

ಹಣಕಾಸಿನ ವ್ಯಾಪಾರ ಯಂತ್ರವಲ್ಲ:-

 

ಹಣಕಾಸಿನ ವ್ಯಾಪಾರವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಬಹು ವೇಗವಾಗಿ ಅತಿ ದೊಡ್ಡ ಲಾಭ ಮಾಡಬಹುದೆಂಬ ತಪ್ಪು ಕಲ್ಪನೆಯಿಂದ ನಷ್ಟಕ್ಕೆ ಈಡಾಗುತ್ತಾರೆ.  ತಪ್ಪಾದ ಕಲ್ಫನೆಯಿಂದ ಮಾರುಕಟ್ಟೆಯಲ್ಲಿ ಹಣವನ್ನು ಕಳೆದುಕೊಳ್ಳಬೇಡಿ ಎನ್ನುವುದೇ ನನ್ನ ಬೋಧನೆ. ಜನರು ಬಹಳ ಟ್ರೇಡ್ ಮಾಡಿದಷ್ಟು ಅಧಿಕ ಲಾಭ ಗಳಿಸಬಹುದು ಎಂದು ಕೊಂಡಿರುತ್ತಾರೆ. ಆದರೆ ಟ್ರೇಡ್ ಮಾಡುವುದಕ್ಕೆ ಸರಿಯಾದ ಮಾರ್ಗ ತಿಳಿದುಕೊಂಡಿರಬೇಕು. ಇದು ಕೇವಲ ನಮ್ಮ ಅಭಿಪ್ರಾಯವಲ್ಲ ನಿಮ್ಮ ಎದುರು ಟ್ರೇಡ್ ಮಾಡುವ ವ್ಯಕ್ತಿಯ ಅಭಿಪ್ರಾಯವೂ ಕೂಡ.   ಟ್ರೇಡ್ ನಲ್ಲಿ ಸಾಧನೆ ಮಾಡಿದವರ ಪಟ್ಟಿಯಲ್ಲಿ     “ಜಾರ್ಜ್ ಸೊರಸ್”, ಎಂಬುವರು ಒಬ್ಬ ಪ್ರಮುಖ ವ್ಯಕ್ತಿ. ಇವರ ಟ್ರೇಡ್ ನಲ್ಲಿ ಸ್ವತಹ ಇವರೇ ಗುರು ಇವರಿಗೆ.

ನೀವು ಟ್ರೇಡ್ ನಲ್ಲಿ ಎಷ್ಟು ಲಾಭ / ನಷ್ಟ ಮಾಡಿದ್ದೀರಿ ಎಂಬುವುದು ಮುಖ್ಯವಲ್ಲ. ನೀವು ಲಾಭ ಗಳಿಸಲು ಎಷ್ಟು ಹಣದ ಅವಶ್ಯಕತೆಯಿತ್ತು ಹಾಗೂ ನಷ್ಟ ಉಂಟಾದಾಗ ಅದರ ಅವಶ್ಯಕತೆ ಎಷ್ಟು ಎನ್ನುವುದರ ಪಟ್ಟಿ ಇರಬೇಕು. ಟ್ರೇಡ್ ಮಾಡಲು ಆಸಕ್ತಿಇದ್ದರೆ ಸಾಲದು ಅತಿಯಾದ ಆಸೆಗಿಂತ, ಬಹಳ ಶಿಸ್ತು ಇರಬೇಕು. ನಷ್ಟ ಬರುವಂತಹ ಟ್ರೇಡನ್ನು ಆಯ್ಕೆ ಮಾಡಬೇಡಿ. ನಷ್ಟ ಎನ್ನುವುದು ಟ್ರೇಡ್ ನಲ್ಲಿ ಒಂದು ಭಾಗವೇ ಹೊರೆತು ಆಟವಲ್ಲ. ಅದನ್ನು ಮೆಟ್ಟಿ ಬಂದರೆ ಮಾತ್ರ, ಸರಿಯಾದ ಟ್ರೇಡನ್ನು ಆಯ್ಕೆ ಮಾಡಲು ಸಾಧ್ಯ.

 

Recent Posts

Leave a Comment

0
0

Start typing and press Enter to search