ಬೆಳವಣಿಗೆ/ ಅಭಿವೃದ್ದಿ ಮೌಲ್ಯ - Trade Achievers

ಬೆಳವಣಿಗೆ/ ಅಭಿವೃದ್ದಿ ಮೌಲ್ಯ

 In Trading

ಬೆಂಜಮಿನ್ ಗ್ರಹಂ, ಎಂಬುವರನ್ನುಮೌಲ್ಯದ ತಂದೆ ಎಂದು ಕರೆಯುತ್ತಾರೆ. ಏಕೆಂದರೆ ಷೇರುಪೇಟೆಯಲ್ಲಿ ಒಂದು ಸ್ಟಾಕನ್ನು ಕೊಂಡುಕೊಳ್ಳುವುದರ ಬಗ್ಗೆ ಹಾಗೂ ಅದರ ಮೌಲ್ಯದ ಬಗ್ಗೆ ಅತೀ ಹೆಚ್ಚು ಮಾಹಿತಿಯನ್ನು ನೀಡಿದ್ದಾರೆ.  ಸ್ಟಾಕನ್ನು ಕೊಂಡುಕೊಳ್ಳಿ ಹೇಗೆಂದರೆ “ದಿನಸಿ ಪದಾರ್ಥದ ಹಾಗೆ, ಸುಗಂಧ ದ್ರವ್ಯದ ಹಾಗೆ ಅಲ್ಲ”. ಇವರ ಅಮೂಲ್ಯವಾದ ಹೇಳಿಕೆಗಳು ಜನರ ಮದ್ಯ ಅರ್ಥವಾಗದೆ ಉಳಿದಿದೆ. ಈಗಿನ ಜಾಲತಾಣದಲ್ಲಿ ಅವರ ಉದ್ದೇಶವನ್ನು ದಿನಸಿ ವಸ್ತುಗಳನ್ನು ಖರೀದಿ ಮಾಡುವ ಹಾಗೆ ಸರಳವಾಗಿ ಉಲ್ಲೇಖಿಸಿದ್ದಾರೆ.

ಈಗ ನಮ್ಮ ದಿನಸಿ ವಸ್ತುಗಳನ್ನು ನಮ್ಮ ಮನೆಗೆ ಖರೀದಿಸುವ ಬಗ್ಗೆ ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳೋಣ. ನಾವು ಎಲ್ಲಿದ್ದೇವೆ? ವಸ್ತುವಿನ ಗುಣಮಟ್ಟ, ಬೆಲೆಯ ಬಗ್ಗೆ ಕೇಳೋಣ, ನಮ್ಮ ಮನೆಯಲ್ಲಿರುವ ಆರೋಗ್ಯದ ಬಗ್ಗೆ ಗಮನ ಕೋಳ್ಳೋಣ. ಆದರೆ, ನಾವು ಈಗ ಸುಗಂಧ ದ್ರವ್ಯವನ್ನು ಕೊಂಡುಕೊಳ್ಳುವಾಗ ಅದರ ಗುಣಮಟ್ಟ ಹಾಗೂ ಬೆಲೆಯ ಬಗ್ಗೆ ನಾವು ಗಮನ ಕೊಡೊಲ್ಲ. ಆದರೆ, ಅದರ ಪರಿಮಳ ಮತ್ತು ಆಕರ್ಷಣೆಯನ್ನು ಮಾತ್ರ ನೋಡುತ್ತೇವೆ.

ಬೆಂಜಮಿನ್ ಗ್ರಹಂ ಅವರು, ಒಂದು ಸ್ಟಾಕ್ ನ ಮೌಲ್ಯಮಾಪನದ ಬಗ್ಗೆ ಬೋದನೆ ನೀಡಿದ್ದಾರೆ, ಅದು ಹೇಗೆಂದರೆ ದಿನಸಿ ವಸ್ತುವಿನ ಬಗ್ಗೆ ಯಾವುದೇ ರೀತಿಯ ಸುದ್ದಿ ಬಂದರೂ ಕೂಡ ಅದರ ಮೌಲ್ಯದ ಬಗ್ಗೆ ನಮಗೆ ಅರಿವು ಇರುತ್ತದೆ. ಈಗ ಒಂದು ಸ್ಟಾಕ್ ನ ಮೌಲ್ಯಮಾಪನ ಹೇಗೆ ಮಾಡುವುದು ಎಂದು ತಿಳಿಯೋಣ.

ಬೆಂಜಮಿನ್ ಗ್ರಹಂ ಅವರು ಒಂದು ಸ್ಟಾಕನ್ನು ಮೌಲ್ಯಮಾಪನ ಮಾಡುವುದಕ್ಕು ಮುನ್ನ ವಿಭಿನ್ನ ರೀತಿಯ ಸ್ಟಾಕ್ ಬಗ್ಗೆ ತಿಳಿಯೋಣ.  ಮೊದಲನೆಯದಾಗಿ ಅಭಿವೃದ್ದಿ ಸ್ಟಾಕ್ ಮತ್ತೊಂದು ಮೌಲ್ಯದ ಸ್ಟಾಕ್.  ನಾವು ಈಗ ಪ್ರತಿಯೊಂದು ಸ್ಟಾಕ್ ನ ಪಾತ್ರ ಹಾಗೂ ಅದರ ವರ್ಗದ ಬಗ್ಗೆ ತಿಳಿಯೋಣ.

ಅಭಿವೃದ್ದಿಯಾಗಿರುವ ಕಂಪನಿಯ ಸ್ಟಾಕ್ ನಿರಂತರವಾಗಿ ಅದರ ಸರಾಸತರಿ ಆದಾಯಕ್ಕಿಂತ ಹೆಚ್ಚುಪಟು ನೀಡಿರುತ್ತದೆ.  ಇಂತಹ ಸ್ಟಾಕ್ ನಲ್ಲಿ ಜನರು ಹಿಂಡು ಹಿಂಡಾಗಿ ಬಂಡವಾಳ ಹೂಡಿಕೆ ಮಾಡಿರುತ್ತಾರೆ.  ಆದುದರಿಂದ ಜನರಿಗೆ ಇಂತಹ ಸ್ಟಾಕ್ ನಲ್ಲಿ ಅತಿ ಹೆಚ್ಚು ಭರವಸೆ ಹಾಗೆಯೇ ಇಂತಹ ಸ್ಟಾಕ್ ನ ನಡವಳಿಕೆಯು ಇದರ ಬೆಲೆಯು ತನ್ನಷ್ಟಕ್ಕೆ ಏರುತ್ತದೆ. ಇಂತಹ ಕಂಪನಿಯು ಯಾವುದೇ ಕರ್ಪೋರೇಟ್ ಕಂಪನಿಗಳಂತೆ ಯಾವುದೇ ರೀತಿಯಾದಂತಹ ಡಿವೆಡೆಂಟನ್ನು ನೀಡುವುದಿಲ್ಲ ಬದಲಾಗಿ ಸ್ಟಾಕ್ ನ ಬೆಲೆಯನ್ನು ಮುಂದೊಯ್ಯುವುದರಲ್ಲಿ ಹೆಚ್ಚು ಗಮನವಹಿಸುತ್ತದೆ ಮತ್ತು ಪಡೆದ ಲಾಭವನ್ನು ಅವರು ಕಂಪನಿಯ ಬೆಳವಣಿಗೆಗಾಗಿ ಬಳಸುತ್ತಾರೆ. ಏಕೆಂದರೆ ಬಹು ಜನರು ಬೆಳವೆಣಿಗೆಯಾಗಿರುವ ಸ್ಟಾಕ್ ನಲ್ಲಿ ಹೆಚ್ಚು ಬಂಡವಾಳ ಹೂಡುತ್ತಾರೆ ಹಾಗೂ ಅವರು ಸುದ್ದಿ ಮತ್ತು ಮಾರುಕಟ್ಟೆಯಲ್ಲಾಗುವ ಏರುಪೇರುಗಳ ಬಗ್ಗೆ ಬಹು ಸೂಕ್ಷ್ಮವಾಗಿರುತ್ತಾರೆ.

வளர்ச்சி பங்குகள்

ಸ್ಟಾಕ್ ನ ಮೌಲ್ಯ:- ಮತ್ತೊಂದು ಕಡೆ, ಇಂತಹ ಕಂಪನಿಯ ಫಂಡಮೆಂಟಲ್ ಸ್ಟ್ರಾಂಗ್ ಇದ್ದರೂ ಕೂಡ, ಮಾರುಕಟ್ಟೆಯ ಪರಿಸ್ಥಿತಿ ಹಾಗೂ ಕಾರ್ಪೋರೇಟ್ ಸಮಸ್ಯೆಯಿಂದಾಗಿ ಬಹು ಕಡಿಮೆ ದರದಲ್ಲಿ ದೊರೆಯುತ್ತದೆ. ಇಂತಹ ಸ್ಟಾಕ್ ಗಳ ಮೌಲ್ಯವು ಸ್ಥಿರವಾಗಿರುತ್ತದೆ.

ಇಂತಹ ಕಂಪನಿಗಳು ಆಗಾಗ್ಗೆ ಡಿವಿಡೆಂಟ್ಅನ್ನು ನೀಡುತ್ತದೆ. ಇಂತಹ ಸ್ಟಾಕ್ ನಲ್ಲಿ ಜನರ ಹೂಡಿಕೆಯು ಕಡಿಮೆ ಇರುತ್ತದೆ. ಇವರು ಮಾರುಕಟ್ಟೆಯಲ್ಲಗುವ ಏರುಪೇರಿಗೆ ಕೆಳಮುಖವಾಗಿರುತ್ತವೆ (ಪೀಡಿತರಾಗಿರುತ್ತಾರೆ).

ಇಂತಹ ಸ್ಟಾಕ್ ನ್ನು ಹೇಗೆ ಪತ್ತೆ ಹಚ್ಚುವುದು. ಪ್ರತಿಯೊಂದು ಸ್ಟಾಕ್ ಹೂಡಿಕೆದಾರರು ಪಿಇ ಅನುಪಾತ  ಇದರ ಬಗ್ಗೆ ಗಮನ ಹರಿಸಿಯೇ ಬಂದಿರುತ್ತಾರೆ. ಆದರೆ ಕೆಲವೊಬ್ಬರಿಗೆ ಇದರ ಬಗ್ಗೆ ಅರಿವು ಇರುವುದಿಲ್ಲ. ಪಿ.ಇ ಅನುಪಾತ ಬೆಲೆ ಹಾಗೂ ಸ್ಟಾಕ್ ಮದ್ಯದಲ್ಲಿನ ಅನುಪಾತದಲ್ಲಿ ಇದರ ಲಾಭ/ಆದಾಯ ಇರುತ್ತದೆ.

ಉದಾ: ಈಗ ಒಂದು ಸ್ಟಾಕ್ ನ ಲಾಭವು ರೂ.10/- . ಆದರೆ ನೀವು ಇದಕ್ಕೆ ರೂ. 100/- ಕೊಟ್ಟು ಕೊಂಡುಕೊಳ್ಳಿರುತ್ತಿರಿ. ನೀವು ಈಗ ಅದರ ಸರಾಸರಿ ಆದಾಯಕ್ಕಿಂತ 10 ಪಟ್ಟು ಹೆಚ್ಚು ಕೊಟ್ಟಿರುತ್ತೀರಿ.

ಈಗ ಮತ್ತೊಂದು ಉದಾಹರಣೆ ನೋಡೋಣ.

ಇದರಲ್ಲಿ ಎರಡು ಸ್ಟಾಕ್ ಗಳು “ಏ” ಮತ್ತು “ಬಿ”, ಈ ಎರಡು ಸ್ಟಾಕ್ ಗಳು ರೂ. 50 ರಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆ.  ಆರಂಭದಲ್ಲಿ ಎರಡು ಸ್ಟಾಕ್ ಗಳು ಒಂದೇ ದರದಲ್ಲಿರುತ್ತದೆ.  ಈಗ ಬೆಂಜಮಿನ್ ಗ್ರಹಂ ಅವರ ತಾತ್ಪರ್ಯದಲ್ಲಿ ಕೇಳೋಣ, ಮೊದಲನೆಯದಾಗಿ ಅದರ ಬೆಲೆ ಎಷ್ಟು? ಸ್ಟಾಕ್ “ಏ” ರ ಪಿ.ಇ. ಅನುಪಾತವು ರೂ.10/- ಹಾಗೂ ಸ್ಟಾಕ್ “ಬಿ” ರ ಪಿ.ಇ. ಅನುಪಾತವು ರೂ.15/-  ಎಂದು ತೋರುತ್ತದೆ.  ಸ್ಟಾಕ್  “ಏ” ಅದರ   ಸರಾಸರಿ ಆದಾಯಕ್ಕಿಂತ 10 ಪಟ್ಟು ಹೆಚ್ಚಾಗಿ ಹಾಗೂ ಸ್ಟಾಕ್ “ಬಿ” 15 ಪಟ್ಟ ಹೆಚ್ಚಾಗಿ ವ್ಯಾಪರ   ವಹಿವಾಟು ನಡೆಯುತ್ತಿರುತ್ತದೆ. ಆದುದರಿಂದ ಹೂಡಿಕೆದಾರರು  ಸ್ಟಾಕ್“ಏ” ಯನ್ನು ಆಯ್ಕೆ ಮಾಡುತ್ತಾರೆ. ಏಕೆಂದರೆ ಅದರ ಮೌಲ್ಯ ಕಡಿಮೆಯಿದೆ ಸ್ಟಾಕ್ “ಬಿ” ಗಿಂತ.

ಹೂಡಿಕೆದಾರರ ಮತ್ತೊಂದು ವಿಧಾನ:-

ಒಂದು ಸ್ಟಕ್  ನ  ಪಿ.ಇ. ಅನುಪಾತಕ್ಕನುಗುಣವಾಗಿ, ಅದರ ಘಟಕಕ್ಕೆ ಹೋಲಿಸುವುದು. ಒಂದು ಫಾರ್ಮ ಘಟಕ ದ ಪಿ.ಇ. ಅನುಪಾತವು ರೂ. 35/- . ಒಂದು ಬಲವಾದ ಮೂಲಭೂತ ಸೌಕರ್ಯ ಇರುವ ಒಂದು ಫಾರ್ಮ ಕಂಪನಿಯು ರೂ.25/- ಪಿ.ಇ. ಅನುಪಾತದಲ್ಲಿರುತ್ತದೆ. ಈ ಗ ಇಂತಹ ಕಡಿಮೆ ದರದ ಪಿ.ಇ. ಅನುಪಾತ ಇರುವ ಕಂಪನಿಯಲ್ಲಿ ಬಹು ಜನರು ಬಂಡವಾಳ ಹೂಡಿಕೆ ಮಾಡಲು ಬಯಸುತ್ತಾರೆ.

ಇದನ್ನು ಆರಂಭಿಸುವ ಮುನ್ನ:-

  1. ಹೂಡಿಕೆದಾರರು, ಮೊದಲು ಕಂಪನಿಯು ಬಲವಾದ ಮೂಲಭೂತ ಹೊಂದಿದೆಯೆ, ಅಭಿವೃದ್ದಿ ಆಗಿದೆಯೇ ಹಾಗೂ ಹೂಡಿಕೆಗೆ ತಕ್ಕ ಮೌಲ್ಯವಿದೆಯೇ?
  2. ಪೆನ್ನಿ ಸ್ಟಾಕ್ ಗಳು ಕೆಲವೊಮ್ಮೆ ಮೌಲ್ಯಕ್ಕೆ ತಕ್ಕಂತಿರುವುದಿಲ್ಲ. ಮೂಲಭೂತ ಬಲವಾಗಿಲ್ಲದಂತಹ ಸ್ಟಾಕ್ ಗಳು ಕಡಿಮೆದರದಲ್ಲಿ ವಹಿವಾಟು ನಡೆಸುತ್ತಿರುತ್ತದೆ. ಹಾಗೂ ಇಂತಹ ಸ್ಟಾಕ್ ಗಳು ಮೌಲ್ಯಕ್ಕೆ ಸರಿ ಹೊಂದುವಂತಹುದಲ್ಲ.
  3. ಒಂದು ಸ್ಟಾಕನ್ನು ಕೊಳ್ಳುವ ಮುನ್ನ, ನಾವು ಅಂತಹ ಸ್ಟಾಕ್ ಗಳು ಮೊದಲು ಯಾವ ಹಾದಿಯಲ್ಲಿ ನಡೆಯುತ್ತಿದೆ ಎಂದು ತಿಳಿದುಕೊಳ್ಳಬೇಕು. ಒಂದು ವಿಷಯದ ಬಗ್ಗೆ ಅರಿವಿಲ್ಲದೆ ನಡೆಯುವುದು ಬಹು ಅಪಾಯಕಾರಿ.
Recent Posts

Leave a Comment

0
0

Start typing and press Enter to search